Saturday, August 13, 2011

ಕೆಂಡಸಂಪಿಗೆಯಲ್ಲಿ ನನ್ನ ಕತೆ ಮತ್ತು ಲೇಖನ

ಹಲೋ,


ವಿದ್ಯಾಶಂಕರ್ ಹರಪನಹಳ್ಳಿ ಕತೆ `ಉದಯರಾಗ' : http://www.kendasampige.com/article.php?id=4516




ಆಪ್ಕಾ ಬೇಟ ವ್ಹಿಸ್ಕಿ ಬೇಚ್ ರಹಾ ಹೈ!:ಒಂದು ಒಲವಿನ ಓಲೆ :http://www.kendasampige.com/article.php?id=4577



ಪ್ರೀತಿಯಿಂದ,
ವಿದ್ಯಾಶಂಕರ್


ಜಂಬೂದ್ವೀಪೇ... ಭರತಖಂಡೇ...

ಹಲೋ,

ನನ್ನ ಪುಟ್ಟ ಲೇಖನ, ನಿಮ್ಮ ವಿರಾಮದ ಓದಿಗೆ: ‘ಫ್ರಾನ್ಸ್ ಪತ್ರ’ :ಜಂಬೂದ್ವೀಪೇ... ಭರತಖಂಡೇ...
http://www.kendasampige.com/article.php?id=4631

ಪ್ರೀತಿಯಿಂದ,
ವಿದ್ಯಾಶಂಕರ್

Sunday, July 24, 2011

Seasonal feelings !

Seasons of nature are so comply
Thy show up for the occasion and are never shy

Human feeling vary to be low and high
Never timely like seasons, why?

How I wish feelings are like seasons that pass by
then, my heart will know when to laugh or to cry

Can you make this happen? Mr almighty wise guy

Tuesday, July 12, 2011

Final destination

He has come to the crossroads, all his hope is lost
Taking the weary roads in life, the man is so exhaust

He asks himself, what happened to the spirit to live with endurance?
and the promise made to self to live with prudence?

Like a leaf at the mercy of the wind, he aimlessly wanders
"Has destiny got me here or its just myself?" he pauses and ponders

Thinking of what to do to regain his dying spirit
he keeps going, not getting any answers of merit

Will this lost person do something unknown?
And make people say "this great person is one of my own"

Like a selected few, he might not earn money or fame
he still has a role to play in the cruel life's game

For now, he is walking and walking and walking
Alas, he will retire one day when death comes down knocking...

Saturday, June 25, 2011

KatteBoyzBng - Blog closure notice

Dear Friends,

It pains me to tell you all that off late I am thinking of closing the KatteBoyzBng. I feel it has become stale and passed its shelf life.

All though I started it with few goals in mind. I am confident I have and We have achieved most of them.

Personally I have been decently successful in getting into writing habit, which was my childhood passion. My stories and poems got published in prestigious 'KannadaPrabha', 'Sudha', 'ThanksKannada.com' etc. Developed a decent contacts with writers and editors. Most importantly I have improved tremendously as a writer. Today I feel, I am not far away from retiring from IT job and moving to become full time writer and publisher.

I would request you all to take back-up of your write-ups, poems and articles, they are your valuables.

I suggest August 15 2011 as a last date of the blog. Probably I would start something new after that.

I am thankful to all of you for being part of this journey and progress.

Welcome your views and suggestion on this decision.

Thanks and Regards,
VidyaShankar

Sunday, May 15, 2011

ಎರಡು ಕನಸು ಸಿನಿಮಾ ನೀತಿ ಏನಂದರೆ...



ಎರಡು ಕನಸು ಸಿನಿಮಾ ನೀತಿ ಏನಂದರೆ...






ತಿಮ್ಮ : ಗುಂಡ, ರಾಜ್ಕುಮಾರ್-ದು ಎರಡು ಕನಸು ಸಿನಿಮಾ ನೋಡಿದೆಯೇನು?

ಗುಂಡ : ಹೂಂ ರೀ

ತಿಮ್ಮ : ಬಾರಿ ಮೆಸೇಜ್ ಅದ ಅಲಾ?

ಗುಂಡ : ಹೌದ್ರಿ ಬ್ಯಾಚುಲರ್ಸ್-ಗೆ ಬಾರಿ ಮೆಸೇಜ್ ಅದರ್ರಿ!

ತಿಮ್ಮ (ಬಾರಿ ಕನ್-ಫೂಸ್ ಆಗಿ, ಕುತೂಹಲದಿಂದ) : ಅದೇನಪ್ಪ ಅಂತ ಮೆಸೇಜ್?

ಗುಂಡ: ಮದುವಿ ಮುಂಚೆ ಲವ್ ಮಾಡ ಬೇಕ್ರಿ ಅದ್ರ ಅ ಹುಡಿಗಿನ ಲಗ್ನ ಅಗಬರ್ದ್-ರ್ರಿ. ಆಮೇಲೆ ಬೇರೆ ಹುಡಿಗಿನ ಲಗ್ನ ಆಗಬೇಕ್ರಿ. ಆರು ತಿಂಗಳು ಮನೆಗೆ ಕರ್ಕಕೊಂಡು ಬರುಬಾರ್ದ್ರಿ... ಆಮೇಲೆ ಮನೆ ಕರ್ಕಕೊಂಡು ಬಂದ್ ಮ್ಯಾಲೆ ಮೂರು ತಿಂಗಳು ಮಾತಾಡ್ಸ್ ಬಾರ್ದು ರ್ರಿ... ಆಮೇಲೆ ನೋಡ್ರಿ ಎಂತಾ ಹುಡುಗಿ ಅದ್ರು 'ಒಲಿದರು ಚೆನ್ನ ಮುನಿದರು ಚೆನ್ನ ನಿನ್ನ ಪಾದದ ಧೂಳ್ ಆದರು ಚೆನ್ನ' ಅಂತ ಹಾಡು ಹೇಳ್-ಕೊಂತ ಜೀವನ ಪೂರ್ತಿ ಸರಿಗೆ ಸಂಸಾರ ಮಾಡಿಕೊಂಡು ಇರ್ತಾಳ... ಇಲ್ಲ ಅಂದ್ರೆ ಜುಟ್ಟು ಕೈಯಲ್ಲಿ ತೊಗತಾಳ...

ತಿಮ್ಮ : ಹಾಂ!!!

- ವಿದ್ಯಾಶಂಕರ್ ಹರಪನಹಳ್ಳಿ

Sunday, May 8, 2011

ಅಮ್ಮಂದಿರ ದಿನದ ಶುಭಾಶಯಗಳು!!!




ಅಮ್ಮ ಹೇಳಿದ ಸುಳ್ಳು!


ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸುವುದರಲ್ಲಿ ಎಲ್ಲ ಅಮ್ಮಂದಿರಗೆ ಏನೋ ಆಲೋಕಿಕ ತೃಪ್ತಿ. ಈ ಮಕ್ಕಳ ಸೇವೆಯಲ್ಲಿ ಎಷ್ಟು ಪುಣ್ಯಗಳಿಸುವರೋ ಎಲ್ಲ ಅಮ್ಮಂದಿರು. ಸ್ನಾನ ಮನೆಯ ಹಬೆಯಾಡುವ ನೀರು, ಸೀಗೆಯ ಗಮಗಮ... ಎಣ್ಣೆ ಸ್ನಾನದ ನಂತರದ ದಿವ್ಯ ನಿದ್ದೆಯ ಸುಖ... ಎಲ್ಲರ ಬಾಲ್ಯದಲ್ಲೂ ಅದೊಂದು ಸುಂದರ ಘಟ್ಟ.

ದ್ವಾಪರಯುಗದಿಂದ ಇಂದಿನ ಕಾಲದವರೆಗೆ ತಾಯಿಂದರು ಬದಲಾಗಿಲ್ಲ ಅವರ ಸವಾಲುಗಳು ಕೂಡ ಬದಲಾಗಿಲ್ಲ. ದ್ವಾಪರಯುಗದಲ್ಲಿ ಕೂಡ ತಾಯಿ ಯಶೋದ ಬಾಲಕ್ರಿಷ್ಣನಿಗೆ ಎಣ್ಣೆ ಸ್ನಾನ ಮಾಡಿಸಲು ಹರಸಹಾಸ ಮಾಡುತಿದ್ದಳಂತೆ. ಆಗಿನ ಕಾಲದಿಂದ ಈಗಿನ ಕಾಲದವರೆಗೆ ಪರಿಸ್ಥಿತಿ ಹೆಚ್ಚು ಬದಲಾಗಿಲ್ಲ!

ನಮ್ಮ ಮನೆಯಲ್ಲೂ ಕೂಡ ಪರಿಸ್ಥಿತಿ ಬೇರೇನಿಲ್ಲ. ಹೀಗೊಂದು ದಿನ, ನನ್ನ ಆರು ವರುಷ ಮಗನಿಗೆ ಎಣ್ಣೆ ಸ್ನಾನ ಮಾಡಿಸಲು ಅಣಿಯಾಗುತಿದ್ದ ನನ್ನ ಹೆಂಡತಿ, ಮಗನಿಗೆ ಪೂಸಿ ಹೊಡಿಯುತ್ತಾ "ಗುಂಡಪ್ಪಿ ಎಣ್ಣೆ ಸ್ನಾನ ಮಾಡಬೇಕಮ್ಮ... ಆಗ ನೀನು ಬೆಳ್ಳಗೇ ಆಗುತ್ತಿಯ" ಎಂಧ್ಹೇಳಿದಳು. ಮಗ ಅನುಮಾನದಲ್ಲೇ ಒಪ್ಪಿಕೊಂಡ. ಹಾಗುಹೀಗು ಸಮಜಾಯಿಸಿ ಎಣ್ಣೆ ಸ್ನಾನ ಮಾಡಿಸಿದಳು.

ಎಣ್ಣೆ ಸ್ನಾನದ ನಂತರ ಮಗರಾಯ ಕುತೂಹಲದಿಂದ ಕನ್ನಡಿ ಕೇಳಿದ, ಒಂದು ಕ್ಷಣ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಸೂಕ್ಷ್ಮವಾಗಿ ಗಮನಿಸಿ "ಏನಮ್ಮ ನೀನು ಸುಳ್ಳು ಹೇಳ್ತಿಯಾ... ನಾನು ಬೆಳ್ಳಗೇ ಆಗಿಲ್ಲ..."

ನನ್ನ ಹೆಂಡತಿಗೆ ಸ್ವಲ್ಪ ಹೊತ್ತಿಗೆ ಮುಂಚೆ ಏನು ಹೇಳಿದ್ದೆ ಎನ್ನುವುದು ಮರೆತೇ ಹೋಗಿತ್ತು. ಆದರು ಸಂಭಾಳಿಸಿಕೊಂಡು, "ಇಲ್ಲಮ್ಮ ಗುಂಡಪ್ಪಿ ಬೆಳ್ಳಗೇ ಆಗಿದ್ದೀಯ... ಈ ಕನ್ನಡಿ ಹಾಳಾಗಿದೆ... ನೀರಿನ ಹಬೆಗೆ ಸರೀಗೆ ಕಾಣುತ್ತಿಲ್ಲ" ಎಂದು ಹೇಳಿ, ಬಟ್ಟೆ ಹಾಕಿಕೊಳ್ಳಲು ಹೇಳಿ ಒಳಗಿನ ಕೋಣೆಗೇ ಸಗಾಕಿದಳು.

ಒಳಗಿನ ಕೋಣೆಯ ನಿಲುವು ಕನ್ನಡಿ ಮುಂದೆ ನಿಂತ ಮಗ ಮೋಸ ಹೋದ ದ್ವನಿಯಲ್ಲಿ ಕೂಗಿದ "ಏನಮ್ಮ ನೀನು ಸುಳ್ಳು ಹೇಳ್ತಿಯಾ..... ನಾನು ಬೆಳ್ಳಗೆ ಆಗಿಲ್ಲ... ನನ್ನ ಸಾಮಾನು ನೋಡು ಕಪ್ಪಗೆ ಇದೇ!!!"


ಮತ್ತೊಂದು ಸವಾಲು!!!


ಅಮ್ಮಂದಿರ ದಿನದ ಶುಭಾಶಯಗಳು!!!
Also read : ತಾಯಿ ನಸು ನಕ್ಕಳು!

Sunday, April 3, 2011

ಸಮಾಧಾನ


ಸಮಾಧಾನ
- ವಿದ್ಯಾಶಂಕರ್ ಹರಪನಹಳ್ಳಿ


ಹುಡುಗಿ, ಕತ್ತಲ್ಲಲ್ಲಿ ಕೂತು ಬಿಕ್ಕಿ
ವರ್ಥಗೋಳಿಸ ಬೇಡ ಕಣ್ಣಿರ ಹನಿ
ನಿನ್ನಲ್ಲಿ ಮೊಳೆಯಲಿ ಸಣ್ಣ ಆಶಾ ಗರಿಕೆ
 
ತಟ್ಟನೆ ಹಾರಿ ಹೋದ ಹಾಡಿನ ಹಕ್ಕಿ
ಉಳಿಸಿ ಹೋಗಿಹಿದು ಹಾಡಿನ ಗುಂಗು
ಸಿಕ್ಕಿರಬಹುದು ಅದೆಕ್ಕೆಲ್ಲೋ ಹೊಸ ನಂಟು
 
ನೀ ಹಳೆ ಹಾಡಿನ ಗುಂಗು ಮರೆತು
ಹುಡುಕಿಕೊ ಹೊಸದೊಂದು ಹಾಡು
ಅದು ಜೀವನದ ಅನಿವಾರ್ಯ ತುರ್ತು
 
ಹಳೆಯ ಕಹಿ ಬೇಡ ಕೊರಗ ಬೇಡ
ಅಯ್ಯೋ! ಹಾಳು ವಿಧಿಯೇ ಎಂದು ಶಪಿಸಿ
ಸ್ವ-ಕನಿಕರದಿ ಮರುಗ ಬೇಡ
 
ಹೋರಾಟವಿಲ್ಲ ಬದುಕು ಎಂಥಾ ಬದುಕು!?
ನಿನ್ನೆ ಅದು ಸತ್ಯ ಇಂದು ಇದು ಸತ್ಯ
ಮಾಗಿದವಗೆ ಪ್ರತಿನಿತ್ಯ ಹೊಸ ಸತ್ಯ
 
ಏಳೇಳು... ಎದ್ದೇಳು.... ಹುಡುಗಿ
ಹೊಸ ಬದುಕಿಗೆ ಸಿದ್ಧಳಾಗು
ಹೊಸ ನೀರು ಹರಿದಿಹುದು ಗಂಗೆಯಲ್ಲಿ

Saturday, March 19, 2011

ತಂದೆಗೆ ತಕ್ಕ ಮಗ!

ತಂದೆಗೆ ತಕ್ಕ ಮಗ!


Watch my six year old son singing his own composition, a rhyme!

As they say like father like son!

http://www.youtube.com/watch?v=5g5dt-0vPpg

- VidyaShankar, Proud father!

Thursday, March 10, 2011

Congratulations !

Katte Keshava Raya,
Congratulations and welcome to the proud father's katte club !

Post some pics of your daughter here !!

Monday, February 21, 2011

ಸರ್ವಶಕ್ತ ತಂದೆ!!!


ಮೊನ್ನೆ ಟುಲೂಸ್-ನಲ್ಲಿ ಆರು ವರುಷದ ಮಗ ಅದ್ವೈತ್ ಜೊತೆ ಜಪಾನೀಸ್ ಉಧ್ಯಾನವನಕ್ಕೆ ಹೋಗಿದ್ದೆ. ಅಲ್ಲಿ ಒಂದು ದೊಡ್ಡ ಕಾರಂಜೀ. ಸುಮಾರು ಹತ್ತು ಅಡಿ ಎತ್ತರ ಚಿಮ್ಮುತಿತ್ತು. ಅದ್ದನ್ನು ನೋಡಿ ಮಗ ಕೇಳಿದ "ಅಪ್ಪ! ಅವರು ಆಕಾಶ ಯಾಕೆ ತೋಳಿತಾಯಿದ್ದಾರೆ?" ತಂದೆಯಾದವನು ಎಲ್ಲಾ ತಿಳಿದಿರಬೇಕು! "ಮಳೆ ಬಂದು ಆಕಾಶ ಕೊಳೆ ಆಗಿದೆ ಅದಕ್ಕೆ!" ಎಂದು ಸಮಾದಾನ ಹೇಳಿದೆ.

ಕೆಲ್ವಿನ್ ಅಂಡ್ ಹಾಬ್ಸ್ (Calvin and Hobbes) ಕಾಮಿಕ್ಸ್-ನಲ್ಲಿ, ಕೆಲ್ವಿನ್ ಅವನ ಅಪ್ಪನ ಕೇಳ್ತಾನೆ " ಏಟಿಎಂನಿಂದ ಹೇಗೆ ದುಡ್ಡು ಬರುತ್ತೆ?" ತಂದೆ ತುಂಟತನದಿಂದ ಉತ್ತರಿಸುತ್ತಾನೆ "ಏಟಿಎಂನಲ್ಲಿ ಒಬ್ಬ ಮನುಷ್ಯ ಕೂತಿರುತ್ತಾನೆ ನಾವು ಕಾರ್ಡ್ ಹಾಕಿದ ತಕ್ಷಣ ಅ ಕಡೆಯಿಂದ ದುಡ್ಡು ತಳ್ಳುತ್ತಾನೆ! " ಕೆಲ್ವಿನ್-ಗೆ ಇನ್ನೂ ಸಮಾಧಾನವಿಲ್ಲ ಇನ್ನೂ ಅನುಮಾನ! ಮನದಲ್ಲಿ ಮತ್ತೊಂದು ಪ್ರಶ್ನೆ "ಅಪ್ಪ ಆ ವಿಷಯ ನಿನಗೆ ಹೇಗೆ ಗೊತ್ತು ಅಪ್ಪ?" ಕೆಲ್ವಿನ್-ನ ಅಪ್ಪ ತುಂಟತನದಿಂದ ಉತ್ತರಿಸುತ್ತಾನೆ "ಆ ದೇವರು ಪತ್ರಿಯೊಬ್ಬ ತಂದೆಗೂ ಒಂದು ಪುಸ್ತಕ ಕೊಟ್ಟಿರುತ್ತಾನೆ, ಅ ಪುಸ್ತಕದಲ್ಲಿ ಈ ಎಲ್ಲಾ ವಿಷಯ ಇರುತ್ತೆ!!!"

ಎಲ್ಲಾರಿಗೂ ಪುಸ್ತಕ ಕೊಟ್ಟ ದೇವರು ನನ್ನ ಮರೆತನೆ? ಎಂಬುದು ಈಗ ನನ್ನ ಮನದಲ್ಲಿ ಎದ್ದಿರುವ ಪ್ರಶ್ನೆ! ನನ್ನ ಅಪ್ಪನ್ನ ಕೇಳಬೇಕಿದೆ !!!

Sunday, February 20, 2011

ರೈಲು ಬರಲೇ ಬಾರದಿತ್ತು!


ರೈಲು ಬರಲೇ ಬಾರದಿತ್ತು

- ವಿದ್ಯಾಶಂಕರ್ ಹರಪನಹಳ್ಳಿ, ಟುಲೂಸ್, ಫ್ರಾನ್ಸ್



-೧-

ಹಾಳದ ಸೂರ್ಯ ಹುಟ್ಟುವಾಗಲೇ ಒದ್ದೆಮುದ್ದೆ
ಅಗಾಧ ಬಯಲು ನನ್ನ ಮುಂದೆ
ಅನವರತ ಕಾಯಬೇಕು ಎಂದೋ ಬರುವ ರೈಲಿಗೆ
ಸುಡುಗಾಡು ಸ್ಟೇಷನ್ ಮಾಸ್ಟರ್
ಕೊಡುವುದಿಲ್ಲ ಯಾವ ಗ್ಯಾರೆಂಟಿ
ಎಂದು ಬರುವುದೋ ಆ ರೈಲು?

ಮರೆಯಬೇಕು ಬದುಕಿನ ಬಗ್ಗಡಗಳ
ಮೀರಬೇಕು ಅನುಮಾನ ಅವಮಾನಗಳ
ಕಣ್ಣ ಮುಂದೆ ಮಿಂಚುವ ರೈಲಹಳಿ
(ಇರಬಹುದು ಇದು ನನ್ನ ಸ್ವರ್ಗಕ್ಕೆ ದಾರಿ)
ಜೊತೆಗೆ ಜೊತೆಗೆ ಕೊರೆಯುವ ಚಳಿ
ಈ ಹಾದಿಯಲಿ ಸೋಲಬಾರದು ನನ್ನ ಕಾಲು
ಇನ್ನೇನು ಬರಬಹುದು ನನ್ನ ರೈಲು

ಕೇಳುತಿಹುದು ದೂರದಲ್ಲೆಲ್ಲೋ
ರೈಲಿನ ಮೋಹನ ಮುರಳಿ
ಕಾಯುತಿರುವ ಮಂಪರಿನಲ್ಲಿ
ಅನೇಕ ಭ್ರಮೆಗಳ ದಾಳಿ
ಕಾಯಬೇಕು ಕನಸುಗಳ, ತಾಕದಂತೆ ನಿರಾಸೆಯ ಕೊಳ್ಳೀ
ಬರುತಿರಬಹುದು ಇನ್ನೇನು ನನ್ನ ರೈಲು



-೨-

ಬಂದುಬಿಟ್ಟಿದೆ ಹಾಳು ರೈಲು
ಅಂದುಕೊಂಡದ್ದಕ್ಕಿಂತ ಬಲು ಚಿಕ್ಕದು
ಜೊತೆಗೆ ಸಹಪಯಣಿಕರ ನೂಕುನುಗ್ಗಳು
ಮೊದಲೇ ಬಹು ಚೆನ್ನಿತ್ತು!
ನನ್ನ ಮುಂದೆ ಅಗಾಧ ಬಯಲು
ಕಾಯುವುದಕ್ಕೆ ಒಂದು ರೈಲು!

Wednesday, February 16, 2011

Happy Birthday to my little angel Sampada !

It is such a special day today
It's my fairy princess birthday

She is more beautiful than a seashell pearl
There is no match for my little girl

She is my best ever present
My heart and soul is full of content

I do believe in God's miracle
Only he can send me such an angel

Happy Birthday, My sweet little daughter!
May your life be as sweet as sugar

Your's and only your's Appa

Monday, February 14, 2011

Height of joblessness


I became the 14oooth visitor for this page. Actually I was 13988th visitor, hit refresh 12 times and became 14000th. height of joblessness.... :)

Friday, February 11, 2011

Things I miss...

Just two weeks after moving to Toulouse, France I am missing India already!

Let me list out things miss I most, not necessarily in the same order:

1. Cows on the streets... Oh! those lovely holy cows :-)
2. Crowd crowd crowd!!!
3. Stress of the traffic! I have already withdrawal syndrome now
4. Katte boys and Friday Enne (ಎಣ್ಣೆ) session!
5. PVC Flex / Vinyl Hoardings of Sri Deve gowda, Yeddurappa, Kumarswamy!
6. Autos and those gentlemen who drive them
7. Birthday parties, Death anniversaries, endless family functions on weekend
8. Big and bull dozing BMTC buses on the streets
9. Chaats, Pani puries all those spicy snacks
10. Coffee, Tea and Kingfisher
11. Love of Pizzas, burgers, subway sandwiches... is cured now
12. Infosys bus (I missed it many times even when I was in India)
13. Rangolis at door steps...
14. Ferocious and yet friendly street dogs
15. and you!

Saturday, January 1, 2011

Happy New year!

ಕಟ್ಟೆ ಬಳಗದ ಎಲ್ಲರಿಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳು

Happy New Year - 2011

ಹೊಸ ವರುಷಕ್ಕೊಂದು ತಮಾಷೆಯ ಕತೆ

ಕರುಣಾಮಯಿ ದೇವರೆ, ಹ್ಯಾಪಿ ನ್ಯೂ ಇಯರ್!

ಕಟ್ಟೆ ಕೊಂಕು : - ವರುಷ ಹೊಸದಾದರೂ ಹಳೆಯ ಮಾಗಿದ ಗುಂಡೇ ಒಳ್ಳೆಯದು

ಪ್ರೀತಿಯಿಂದ,
ವಿದ್ಯಾಶಂಕರ ಹರಪನಹಳ್ಳಿ