ಅಮ್ಮ ಹೇಳಿದ ಸುಳ್ಳು!
ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸುವುದರಲ್ಲಿ ಎಲ್ಲ ಅಮ್ಮಂದಿರಗೆ ಏನೋ ಆಲೋಕಿಕ ತೃಪ್ತಿ. ಈ ಮಕ್ಕಳ ಸೇವೆಯಲ್ಲಿ ಎಷ್ಟು ಪುಣ್ಯಗಳಿಸುವರೋ ಎಲ್ಲ ಅಮ್ಮಂದಿರು. ಸ್ನಾನ ಮನೆಯ ಹಬೆಯಾಡುವ ನೀರು, ಸೀಗೆಯ ಗಮಗಮ... ಎಣ್ಣೆ ಸ್ನಾನದ ನಂತರದ ದಿವ್ಯ ನಿದ್ದೆಯ ಸುಖ... ಎಲ್ಲರ ಬಾಲ್ಯದಲ್ಲೂ ಅದೊಂದು ಸುಂದರ ಘಟ್ಟ.
ದ್ವಾಪರಯುಗದಿಂದ ಇಂದಿನ ಕಾಲದವರೆಗೆ ತಾಯಿಂದರು ಬದಲಾಗಿಲ್ಲ ಅವರ ಸವಾಲುಗಳು ಕೂಡ ಬದಲಾಗಿಲ್ಲ. ದ್ವಾಪರಯುಗದಲ್ಲಿ ಕೂಡ ತಾಯಿ ಯಶೋದ ಬಾಲಕ್ರಿಷ್ಣನಿಗೆ ಎಣ್ಣೆ ಸ್ನಾನ ಮಾಡಿಸಲು ಹರಸಹಾಸ ಮಾಡುತಿದ್ದಳಂತೆ. ಆಗಿನ ಕಾಲದಿಂದ ಈಗಿನ ಕಾಲದವರೆಗೆ ಪರಿಸ್ಥಿತಿ ಹೆಚ್ಚು ಬದಲಾಗಿಲ್ಲ!
ನಮ್ಮ ಮನೆಯಲ್ಲೂ ಕೂಡ ಪರಿಸ್ಥಿತಿ ಬೇರೇನಿಲ್ಲ. ಹೀಗೊಂದು ದಿನ, ನನ್ನ ಆರು ವರುಷ ಮಗನಿಗೆ ಎಣ್ಣೆ ಸ್ನಾನ ಮಾಡಿಸಲು ಅಣಿಯಾಗುತಿದ್ದ ನನ್ನ ಹೆಂಡತಿ, ಮಗನಿಗೆ ಪೂಸಿ ಹೊಡಿಯುತ್ತಾ "ಗುಂಡಪ್ಪಿ ಎಣ್ಣೆ ಸ್ನಾನ ಮಾಡಬೇಕಮ್ಮ... ಆಗ ನೀನು ಬೆಳ್ಳಗೇ ಆಗುತ್ತಿಯ" ಎಂಧ್ಹೇಳಿದಳು. ಮಗ ಅನುಮಾನದಲ್ಲೇ ಒಪ್ಪಿಕೊಂಡ. ಹಾಗುಹೀಗು ಸಮಜಾಯಿಸಿ ಎಣ್ಣೆ ಸ್ನಾನ ಮಾಡಿಸಿದಳು.
ಎಣ್ಣೆ ಸ್ನಾನದ ನಂತರ ಮಗರಾಯ ಕುತೂಹಲದಿಂದ ಕನ್ನಡಿ ಕೇಳಿದ, ಒಂದು ಕ್ಷಣ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಸೂಕ್ಷ್ಮವಾಗಿ ಗಮನಿಸಿ "ಏನಮ್ಮ ನೀನು ಸುಳ್ಳು ಹೇಳ್ತಿಯಾ... ನಾನು ಬೆಳ್ಳಗೇ ಆಗಿಲ್ಲ..."
ನನ್ನ ಹೆಂಡತಿಗೆ ಸ್ವಲ್ಪ ಹೊತ್ತಿಗೆ ಮುಂಚೆ ಏನು ಹೇಳಿದ್ದೆ ಎನ್ನುವುದು ಮರೆತೇ ಹೋಗಿತ್ತು. ಆದರು ಸಂಭಾಳಿಸಿಕೊಂಡು, "ಇಲ್ಲಮ್ಮ ಗುಂಡಪ್ಪಿ ಬೆಳ್ಳಗೇ ಆಗಿದ್ದೀಯ... ಈ ಕನ್ನಡಿ ಹಾಳಾಗಿದೆ... ನೀರಿನ ಹಬೆಗೆ ಸರೀಗೆ ಕಾಣುತ್ತಿಲ್ಲ" ಎಂದು ಹೇಳಿ, ಬಟ್ಟೆ ಹಾಕಿಕೊಳ್ಳಲು ಹೇಳಿ ಒಳಗಿನ ಕೋಣೆಗೇ ಸಗಾಕಿದಳು.
ಒಳಗಿನ ಕೋಣೆಯ ನಿಲುವು ಕನ್ನಡಿ ಮುಂದೆ ನಿಂತ ಮಗ ಮೋಸ ಹೋದ ದ್ವನಿಯಲ್ಲಿ ಕೂಗಿದ "ಏನಮ್ಮ ನೀನು ಸುಳ್ಳು ಹೇಳ್ತಿಯಾ..... ನಾನು ಬೆಳ್ಳಗೆ ಆಗಿಲ್ಲ... ನನ್ನ ಸಾಮಾನು ನೋಡು ಕಪ್ಪಗೆ ಇದೇ!!!"
ಮತ್ತೊಂದು ಸವಾಲು!!!
ಅಮ್ಮಂದಿರ ದಿನದ ಶುಭಾಶಯಗಳು!!!
Also read : ತಾಯಿ ನಸು ನಕ್ಕಳು!

No comments:
Post a Comment