Monday, February 21, 2011

ಸರ್ವಶಕ್ತ ತಂದೆ!!!


ಮೊನ್ನೆ ಟುಲೂಸ್-ನಲ್ಲಿ ಆರು ವರುಷದ ಮಗ ಅದ್ವೈತ್ ಜೊತೆ ಜಪಾನೀಸ್ ಉಧ್ಯಾನವನಕ್ಕೆ ಹೋಗಿದ್ದೆ. ಅಲ್ಲಿ ಒಂದು ದೊಡ್ಡ ಕಾರಂಜೀ. ಸುಮಾರು ಹತ್ತು ಅಡಿ ಎತ್ತರ ಚಿಮ್ಮುತಿತ್ತು. ಅದ್ದನ್ನು ನೋಡಿ ಮಗ ಕೇಳಿದ "ಅಪ್ಪ! ಅವರು ಆಕಾಶ ಯಾಕೆ ತೋಳಿತಾಯಿದ್ದಾರೆ?" ತಂದೆಯಾದವನು ಎಲ್ಲಾ ತಿಳಿದಿರಬೇಕು! "ಮಳೆ ಬಂದು ಆಕಾಶ ಕೊಳೆ ಆಗಿದೆ ಅದಕ್ಕೆ!" ಎಂದು ಸಮಾದಾನ ಹೇಳಿದೆ.

ಕೆಲ್ವಿನ್ ಅಂಡ್ ಹಾಬ್ಸ್ (Calvin and Hobbes) ಕಾಮಿಕ್ಸ್-ನಲ್ಲಿ, ಕೆಲ್ವಿನ್ ಅವನ ಅಪ್ಪನ ಕೇಳ್ತಾನೆ " ಏಟಿಎಂನಿಂದ ಹೇಗೆ ದುಡ್ಡು ಬರುತ್ತೆ?" ತಂದೆ ತುಂಟತನದಿಂದ ಉತ್ತರಿಸುತ್ತಾನೆ "ಏಟಿಎಂನಲ್ಲಿ ಒಬ್ಬ ಮನುಷ್ಯ ಕೂತಿರುತ್ತಾನೆ ನಾವು ಕಾರ್ಡ್ ಹಾಕಿದ ತಕ್ಷಣ ಅ ಕಡೆಯಿಂದ ದುಡ್ಡು ತಳ್ಳುತ್ತಾನೆ! " ಕೆಲ್ವಿನ್-ಗೆ ಇನ್ನೂ ಸಮಾಧಾನವಿಲ್ಲ ಇನ್ನೂ ಅನುಮಾನ! ಮನದಲ್ಲಿ ಮತ್ತೊಂದು ಪ್ರಶ್ನೆ "ಅಪ್ಪ ಆ ವಿಷಯ ನಿನಗೆ ಹೇಗೆ ಗೊತ್ತು ಅಪ್ಪ?" ಕೆಲ್ವಿನ್-ನ ಅಪ್ಪ ತುಂಟತನದಿಂದ ಉತ್ತರಿಸುತ್ತಾನೆ "ಆ ದೇವರು ಪತ್ರಿಯೊಬ್ಬ ತಂದೆಗೂ ಒಂದು ಪುಸ್ತಕ ಕೊಟ್ಟಿರುತ್ತಾನೆ, ಅ ಪುಸ್ತಕದಲ್ಲಿ ಈ ಎಲ್ಲಾ ವಿಷಯ ಇರುತ್ತೆ!!!"

ಎಲ್ಲಾರಿಗೂ ಪುಸ್ತಕ ಕೊಟ್ಟ ದೇವರು ನನ್ನ ಮರೆತನೆ? ಎಂಬುದು ಈಗ ನನ್ನ ಮನದಲ್ಲಿ ಎದ್ದಿರುವ ಪ್ರಶ್ನೆ! ನನ್ನ ಅಪ್ಪನ್ನ ಕೇಳಬೇಕಿದೆ !!!

No comments: