ರೈಲು ಬರಲೇ ಬಾರದಿತ್ತು
- ವಿದ್ಯಾಶಂಕರ್ ಹರಪನಹಳ್ಳಿ, ಟುಲೂಸ್, ಫ್ರಾನ್ಸ್
-೧-
ಹಾಳದ ಸೂರ್ಯ ಹುಟ್ಟುವಾಗಲೇ ಒದ್ದೆಮುದ್ದೆ
ಅಗಾಧ ಬಯಲು ನನ್ನ ಮುಂದೆ
ಅನವರತ ಕಾಯಬೇಕು ಎಂದೋ ಬರುವ ರೈಲಿಗೆ
ಸುಡುಗಾಡು ಸ್ಟೇಷನ್ ಮಾಸ್ಟರ್
ಕೊಡುವುದಿಲ್ಲ ಯಾವ ಗ್ಯಾರೆಂಟಿ
ಎಂದು ಬರುವುದೋ ಆ ರೈಲು?
ಮರೆಯಬೇಕು ಬದುಕಿನ ಬಗ್ಗಡಗಳ
ಮೀರಬೇಕು ಅನುಮಾನ ಅವಮಾನಗಳ
ಕಣ್ಣ ಮುಂದೆ ಮಿಂಚುವ ರೈಲಹಳಿ
(ಇರಬಹುದು ಇದು ನನ್ನ ಸ್ವರ್ಗಕ್ಕೆ ದಾರಿ)
ಜೊತೆಗೆ ಜೊತೆಗೆ ಕೊರೆಯುವ ಚಳಿ
ಈ ಹಾದಿಯಲಿ ಸೋಲಬಾರದು ನನ್ನ ಕಾಲು
ಇನ್ನೇನು ಬರಬಹುದು ನನ್ನ ರೈಲು
ಕೇಳುತಿಹುದು ದೂರದಲ್ಲೆಲ್ಲೋ
ರೈಲಿನ ಮೋಹನ ಮುರಳಿ
ಕಾಯುತಿರುವ ಮಂಪರಿನಲ್ಲಿ
ಅನೇಕ ಭ್ರಮೆಗಳ ದಾಳಿ
ಕಾಯಬೇಕು ಕನಸುಗಳ, ತಾಕದಂತೆ ನಿರಾಸೆಯ ಕೊಳ್ಳೀ
ಬರುತಿರಬಹುದು ಇನ್ನೇನು ನನ್ನ ರೈಲು
-೨-
ಬಂದುಬಿಟ್ಟಿದೆ ಹಾಳು ರೈಲು
ಅಂದುಕೊಂಡದ್ದಕ್ಕಿಂತ ಬಲು ಚಿಕ್ಕದು
ಜೊತೆಗೆ ಸಹಪಯಣಿಕರ ನೂಕುನುಗ್ಗಳು
ಮೊದಲೇ ಬಹು ಚೆನ್ನಿತ್ತು!
ನನ್ನ ಮುಂದೆ ಅಗಾಧ ಬಯಲು
ಕಾಯುವುದಕ್ಕೆ ಒಂದು ರೈಲು!
- ವಿದ್ಯಾಶಂಕರ್ ಹರಪನಹಳ್ಳಿ, ಟುಲೂಸ್, ಫ್ರಾನ್ಸ್
-೧-
ಹಾಳದ ಸೂರ್ಯ ಹುಟ್ಟುವಾಗಲೇ ಒದ್ದೆಮುದ್ದೆ
ಅಗಾಧ ಬಯಲು ನನ್ನ ಮುಂದೆ
ಅನವರತ ಕಾಯಬೇಕು ಎಂದೋ ಬರುವ ರೈಲಿಗೆ
ಸುಡುಗಾಡು ಸ್ಟೇಷನ್ ಮಾಸ್ಟರ್
ಕೊಡುವುದಿಲ್ಲ ಯಾವ ಗ್ಯಾರೆಂಟಿ
ಎಂದು ಬರುವುದೋ ಆ ರೈಲು?
ಮರೆಯಬೇಕು ಬದುಕಿನ ಬಗ್ಗಡಗಳ
ಮೀರಬೇಕು ಅನುಮಾನ ಅವಮಾನಗಳ
ಕಣ್ಣ ಮುಂದೆ ಮಿಂಚುವ ರೈಲಹಳಿ
(ಇರಬಹುದು ಇದು ನನ್ನ ಸ್ವರ್ಗಕ್ಕೆ ದಾರಿ)
ಜೊತೆಗೆ ಜೊತೆಗೆ ಕೊರೆಯುವ ಚಳಿ
ಈ ಹಾದಿಯಲಿ ಸೋಲಬಾರದು ನನ್ನ ಕಾಲು
ಇನ್ನೇನು ಬರಬಹುದು ನನ್ನ ರೈಲು
ಕೇಳುತಿಹುದು ದೂರದಲ್ಲೆಲ್ಲೋ
ರೈಲಿನ ಮೋಹನ ಮುರಳಿ
ಕಾಯುತಿರುವ ಮಂಪರಿನಲ್ಲಿ
ಅನೇಕ ಭ್ರಮೆಗಳ ದಾಳಿ
ಕಾಯಬೇಕು ಕನಸುಗಳ, ತಾಕದಂತೆ ನಿರಾಸೆಯ ಕೊಳ್ಳೀ
ಬರುತಿರಬಹುದು ಇನ್ನೇನು ನನ್ನ ರೈಲು
-೨-
ಬಂದುಬಿಟ್ಟಿದೆ ಹಾಳು ರೈಲು
ಅಂದುಕೊಂಡದ್ದಕ್ಕಿಂತ ಬಲು ಚಿಕ್ಕದು
ಜೊತೆಗೆ ಸಹಪಯಣಿಕರ ನೂಕುನುಗ್ಗಳು
ಮೊದಲೇ ಬಹು ಚೆನ್ನಿತ್ತು!
ನನ್ನ ಮುಂದೆ ಅಗಾಧ ಬಯಲು
ಕಾಯುವುದಕ್ಕೆ ಒಂದು ರೈಲು!
No comments:
Post a Comment