Saturday, October 2, 2010

ಅಪ್ಪ ಬಂದ್ರು!


ಅಪ್ಪ ಬಂದ್ರು!


- ವಿದ್ಯಾಶಂಕರ ಹರಪನಹಳ್ಳಿ,
ಬೆಂಗಳೂರು
೦೨/೧೦/೨೦೧೦



-೧-
ಬಹುದಿನದ ನಂತರ ಊರಿಂದ ಮರಳಿದಾಗ ಮಗನ ಉದ್ಗಾರ
"ಅಪ್ಪ ಬಂದ್ರು!"
ಅದನ್ನು ಸ್ನೇಹಿತರಿಗೆ ಹೇಳುವ ಸಂಭ್ರಮ
"ನಮ್ಮ ಅಪ್ಪ ಬಂದ್ರು!"
ಹುಚ್ಚುಕೋಡಿ! ಎಷ್ಟು ಅಭದ್ರತೆ ಅನುಭವಿಸುತಿತ್ತೊ...!
ಇನ್ನು ವರುಷ ಐದು...
ಹುಡುಕುತ್ತಿತ್ತಂತೆ ಅಪ್ಪನ್ನ ದಿನವೂ ಬೆಳಗ್ಗೆ ಎದ್ದು...
ಊಹ್ಂ ಬಿಟ್ಟು ಬಿಡಬೇಕು ಈ ಕೆಲಸ ಎನ್ನುವೆ ಮನನೊಂದು...
ಸಾಧ್ಯವಿಲ್ಲ ಎನ್ನುವುದು ನನಗೂ ಗೊತ್ತು ನಿಮಗೂ ಗೊತ್ತು

-೨-
ಪ್ರತಿನಿತ್ಯ ರಾತ್ರಿ ಮನೆಗೆ ಬಂದಾಗ
ಸ್ವಾಗತಿಸುವವು ಚದುರಿದ ಆಟದ ಬೊಂಬೆಗಳು
ಮಲಗಿದ ಮಗು...
ಆಕಾಶದಲ್ಲಿ ಕರುಣಾಮುಖಿ ಚಂದ್ರ...
ಹೊಳೆವ ಕಣ್ಣಿರ ಹನಿ ನಕ್ಷತ್ರ?!
ತಲೆಯಲ್ಲಿ ಅರಬೆಂದ ಅಫೀಸ್ ಕೆಲಸಗಳು...
ಮನಸ್ಪೂರ್ತಿಯಾಗಿ ನಗಲು ಬಿಡುವುದಿಲ್ಲ... ಅಳಲು ಬಿಡುವುದಿಲ್ಲ...
ಊಹ್ಂ ಬಿಟ್ಟು ಬಿಡಬೇಕು ಈ ಕೆಲಸ ಎನ್ನುವೆ ಮನನೊಂದು...
ಸಾದ್ಯವಿಲ್ಲ ಎನ್ನುವುದು ನನಗೂ ಗೊತ್ತು ನಿಮಗೂ ಗೊತ್ತು

-೩-
ತಪ್ಪಿತಸ್ಥನೆಂಬ ಭಾವ ಅವರಿಸಿದಾಗ...
ಪರಿಹಾರವೆಂಬಂತೆ ನಿಮ್ಮಂತೆ ನಾನು ಕೊಳ್ಳುವೆ ಆಟದ ಬೊಂಬೆ ಇನ್ನೆರಡು
ಯಾವ ಬೊಂಬೆಯು ತರಿಸುವುದಿಲ್ಲ ಉದ್ಗಾರ... "ಅಪ್ಪ ಬಂದ್ರು!"

No comments: