Monday, March 15, 2010

ವಿನಯ್ ಭಾರತಕ್ಕೆ ಬರುವನು!

ಕೇಶವನು ಓಲೆಯ ಬರೆದಿಹನು
ವಿನಯ್ ಭಾರತಕ್ಕೆ ಬರುವನು
ಜರ್ಮನಿಯಿಂದ, ಈ ಭಾನುವಾರದಂದು

ಕೇಳಲಿಕ್ಕಿವೆ ವಿನಯನ ಕೆಲವು ಪ್ರಶ್ನೆಗಳ
ಭಾರತವ ಎಷ್ಟು ಮಿಸ್ ಮಾಡಿದೆ
ಜರ್ಮನಿಯಲ್ಲಿ ಎಷ್ಟು ಮಿಸ್ ಗಳ ಕಿಸ್ ಮಾಡಿದೆ
ಕಟ್ಟೆಹುಡುಗರ ಎಷ್ಟು ನೆನೆದೆ
ಅಲ್ಲಿ ಕುಡಿದು ಎಷ್ಟು ಕೆನೆದೆ!
....
....
ಮಗು ಹಗಲೆಲ್ಲ ಎಷ್ಟೇ ಹಾಡಿ, ಆಟವಾಡಿ ಕುಣಿದರೂ
ಇರುಳಲ್ಲಿ ಸೇರುವುದು ಅಮ್ಮನ ಮಡಿಲು
ಜಗವೆಲ್ಲ ಸುತ್ತಿ ಕುಡಿದು, ಕುಣಿದು ಎಷ್ಟೇ ಮೆರೆದರು
ಬರಲೇ ಬೇಕು ಭಾರತಕ್ಕೆ ನಮ್ಮ ಊರ ನೆನೆದು

(೨೦೦೯ ಮಾರ್ಚಲ್ಲಿ ಬರೆದಿದ್ದು)

No comments: