ಬಹುಶಃ ಮಹಾಭಾರತ ಸುಳ್ಳಿರಬೇಕು!
-೧-
ಹೆಂಡತಿ ಹಳಬಳಾಗಿದ್ದಾಳೆ
ಮಗ ದೊಡ್ದವನಗಿದ್ದಾನೆ
ಮುದ್ದು ಮಾಡಿದರೆ ಕೆನ್ನೆ ವರಸಿಕೊಳ್ಳುವಷ್ಟು
ತೋಳುಗಳೆಲ್ಲ ಬಣ ಬಣ...
ಎತ್ತಿ ಮುದ್ದಾಡಲು ಪುಟ್ಟದೊಂದು ಮಗು ಬೇಕಿದೆ
ಹಳೆ ಕಷ್ಟಗಳ ಮರೆಯಲು ಹೊಸ ನಿರೀಕ್ಷೆಯ ದೀಪ ಬೆಳಗಲು
ತೋಳು ತುಂಬುವಂತ... ಮತ್ತೆ ನನ್ನ ಎದೆ ಬಡಿತವ ಕೇಳುವಂತ
ಮತ್ತೆ ಸಜ್ಜನಿಕೆಯ ಮಾನವಂತನಗಿಸಲು
ಹೊಸ ಸಾದ್ಯತೆಯ ಮಗುವಿನ ನಿರೀಕ್ಷೆ ಹುಟ್ಟಿದೆ
ಪುಟ್ಟ ಕಂದನ ಕನಸು ಹುಟ್ಟಿದೆ
-೨-
ನೂರೊಂದು ಮಕ್ಕಳ ಮುದ್ದಿಸಿ ಬೆಳೆಸಿದ
ಧೃತರಾಷ್ಟ್ರನ ಮನಸ್ಸಲ್ಲಿ ಅಷ್ಟೊಂದು ಕಲ್ಮಶವೇ ?
ಬಹುಶಃ ಮಹಾಭಾರತ ಸುಳ್ಳಿರಬೇಕು!