ಸಮಾಧಾನ
- ವಿದ್ಯಾಶಂಕರ್ ಹರಪನಹಳ್ಳಿ
ಹುಡುಗಿ, ಕತ್ತಲ್ಲಲ್ಲಿ ಕೂತು ಬಿಕ್ಕಿ
ವರ್ಥಗೋಳಿಸ ಬೇಡ ಕಣ್ಣಿರ ಹನಿ
ನಿನ್ನಲ್ಲಿ ಮೊಳೆಯಲಿ ಸಣ್ಣ ಆಶಾ ಗರಿಕೆ
ತಟ್ಟನೆ ಹಾರಿ ಹೋದ ಹಾಡಿನ ಹಕ್ಕಿ
ಉಳಿಸಿ ಹೋಗಿಹಿದು ಹಾಡಿನ ಗುಂಗು
ಸಿಕ್ಕಿರಬಹುದು ಅದೆಕ್ಕೆಲ್ಲೋ ಹೊಸ ನಂಟು
ನೀ ಹಳೆ ಹಾಡಿನ ಗುಂಗು ಮರೆತು
ಹುಡುಕಿಕೊ ಹೊಸದೊಂದು ಹಾಡು
ಅದು ಜೀವನದ ಅನಿವಾರ್ಯ ತುರ್ತು
ಹಳೆಯ ಕಹಿ ಬೇಡ ಕೊರಗ ಬೇಡ
ಅಯ್ಯೋ! ಹಾಳು ವಿಧಿಯೇ ಎಂದು ಶಪಿಸಿ
ಸ್ವ-ಕನಿಕರದಿ ಮರುಗ ಬೇಡ
ಹೋರಾಟವಿಲ್ಲ ಬದುಕು ಎಂಥಾ ಬದುಕು!?
ನಿನ್ನೆ ಅದು ಸತ್ಯ ಇಂದು ಇದು ಸತ್ಯ
ಮಾಗಿದವಗೆ ಪ್ರತಿನಿತ್ಯ ಹೊಸ ಸತ್ಯ
ಏಳೇಳು... ಎದ್ದೇಳು.... ಹುಡುಗಿ
ಹೊಸ ಬದುಕಿಗೆ ಸಿದ್ಧಳಾಗು
ಹೊಸ ನೀರು ಹರಿದಿಹುದು ಗಂಗೆಯಲ್ಲಿ