Bangalore Katte Boyz (Authentic) page :-) This is authentic web site for Bangalore's fun loving Katte Boyz group.
Sunday, January 1, 2012
ಏನೋ ಬಿಡಿ ಸಾಯ್ಲಿ! - ಕನ್ನಡ ತಮಾಷೆ ಹಾಡು
ಇದೊಂದು ಕನ್ನಡ ಸಿನಿಕ್ ಹಾಡು. ರಾಜಕೀಯ ವಂಗ್ಯ. ಕನ್ನಡ ರಾಜಕೀಯ ದೊಂಬರಾಟದ ಹಾಡು. ಒಮ್ಮೆ ನೋಡಿ ಜೋರಾಗಿ ನಕ್ಕು ಬಿಡಿ ಹಾಗೆ ಒಂದು ಕ್ಷಣ ಆಲೋಚಿಸಿ ಇಲ್ಲಾಂದ್ರೆ ಏನೋ ಬಿಡಿ ಸಾಯ್ಲಿ! :-)
http://www.youtube.com/watch?v=kejGNUUZA34&context=C39bf4b2ADOEgsToPDskIVMpaF_lWg05uUFUoGKdYQ
- ವಿದ್ಯಾಶಂಕರ್ ಹರಪನಹಳ್ಳಿ
Saturday, August 13, 2011
ಕೆಂಡಸಂಪಿಗೆಯಲ್ಲಿ ನನ್ನ ಕತೆ ಮತ್ತು ಲೇಖನ
ವಿದ್ಯಾಶಂಕರ್ ಹರಪನಹಳ್ಳಿ ಕತೆ `ಉದಯರಾಗ' : http://www.kendasampige.com/article.php?id=4516
ಆಪ್ಕಾ ಬೇಟ ವ್ಹಿಸ್ಕಿ ಬೇಚ್ ರಹಾ ಹೈ!:ಒಂದು ಒಲವಿನ ಓಲೆ :http://www.kendasampige.com/article.php?id=4577
ಪ್ರೀತಿಯಿಂದ,
ವಿದ್ಯಾಶಂಕರ್
ಜಂಬೂದ್ವೀಪೇ... ಭರತಖಂಡೇ...
ನನ್ನ ಪುಟ್ಟ ಲೇಖನ, ನಿಮ್ಮ ವಿರಾಮದ ಓದಿಗೆ: ‘ಫ್ರಾನ್ಸ್ ಪತ್ರ’ :ಜಂಬೂದ್ವೀಪೇ... ಭರತಖಂಡೇ...
http://www.kendasampige.com/article.php?id=4631
ಪ್ರೀತಿಯಿಂದ,
ವಿದ್ಯಾಶಂಕರ್
Sunday, May 8, 2011
ಅಮ್ಮಂದಿರ ದಿನದ ಶುಭಾಶಯಗಳು!!!

ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸುವುದರಲ್ಲಿ ಎಲ್ಲ ಅಮ್ಮಂದಿರಗೆ ಏನೋ ಆಲೋಕಿಕ ತೃಪ್ತಿ. ಈ ಮಕ್ಕಳ ಸೇವೆಯಲ್ಲಿ ಎಷ್ಟು ಪುಣ್ಯಗಳಿಸುವರೋ ಎಲ್ಲ ಅಮ್ಮಂದಿರು. ಸ್ನಾನ ಮನೆಯ ಹಬೆಯಾಡುವ ನೀರು, ಸೀಗೆಯ ಗಮಗಮ... ಎಣ್ಣೆ ಸ್ನಾನದ ನಂತರದ ದಿವ್ಯ ನಿದ್ದೆಯ ಸುಖ... ಎಲ್ಲರ ಬಾಲ್ಯದಲ್ಲೂ ಅದೊಂದು ಸುಂದರ ಘಟ್ಟ.
ದ್ವಾಪರಯುಗದಿಂದ ಇಂದಿನ ಕಾಲದವರೆಗೆ ತಾಯಿಂದರು ಬದಲಾಗಿಲ್ಲ ಅವರ ಸವಾಲುಗಳು ಕೂಡ ಬದಲಾಗಿಲ್ಲ. ದ್ವಾಪರಯುಗದಲ್ಲಿ ಕೂಡ ತಾಯಿ ಯಶೋದ ಬಾಲಕ್ರಿಷ್ಣನಿಗೆ ಎಣ್ಣೆ ಸ್ನಾನ ಮಾಡಿಸಲು ಹರಸಹಾಸ ಮಾಡುತಿದ್ದಳಂತೆ. ಆಗಿನ ಕಾಲದಿಂದ ಈಗಿನ ಕಾಲದವರೆಗೆ ಪರಿಸ್ಥಿತಿ ಹೆಚ್ಚು ಬದಲಾಗಿಲ್ಲ!
ನಮ್ಮ ಮನೆಯಲ್ಲೂ ಕೂಡ ಪರಿಸ್ಥಿತಿ ಬೇರೇನಿಲ್ಲ. ಹೀಗೊಂದು ದಿನ, ನನ್ನ ಆರು ವರುಷ ಮಗನಿಗೆ ಎಣ್ಣೆ ಸ್ನಾನ ಮಾಡಿಸಲು ಅಣಿಯಾಗುತಿದ್ದ ನನ್ನ ಹೆಂಡತಿ, ಮಗನಿಗೆ ಪೂಸಿ ಹೊಡಿಯುತ್ತಾ "ಗುಂಡಪ್ಪಿ ಎಣ್ಣೆ ಸ್ನಾನ ಮಾಡಬೇಕಮ್ಮ... ಆಗ ನೀನು ಬೆಳ್ಳಗೇ ಆಗುತ್ತಿಯ" ಎಂಧ್ಹೇಳಿದಳು. ಮಗ ಅನುಮಾನದಲ್ಲೇ ಒಪ್ಪಿಕೊಂಡ. ಹಾಗುಹೀಗು ಸಮಜಾಯಿಸಿ ಎಣ್ಣೆ ಸ್ನಾನ ಮಾಡಿಸಿದಳು.
ಎಣ್ಣೆ ಸ್ನಾನದ ನಂತರ ಮಗರಾಯ ಕುತೂಹಲದಿಂದ ಕನ್ನಡಿ ಕೇಳಿದ, ಒಂದು ಕ್ಷಣ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಸೂಕ್ಷ್ಮವಾಗಿ ಗಮನಿಸಿ "ಏನಮ್ಮ ನೀನು ಸುಳ್ಳು ಹೇಳ್ತಿಯಾ... ನಾನು ಬೆಳ್ಳಗೇ ಆಗಿಲ್ಲ..."
ನನ್ನ ಹೆಂಡತಿಗೆ ಸ್ವಲ್ಪ ಹೊತ್ತಿಗೆ ಮುಂಚೆ ಏನು ಹೇಳಿದ್ದೆ ಎನ್ನುವುದು ಮರೆತೇ ಹೋಗಿತ್ತು. ಆದರು ಸಂಭಾಳಿಸಿಕೊಂಡು, "ಇಲ್ಲಮ್ಮ ಗುಂಡಪ್ಪಿ ಬೆಳ್ಳಗೇ ಆಗಿದ್ದೀಯ... ಈ ಕನ್ನಡಿ ಹಾಳಾಗಿದೆ... ನೀರಿನ ಹಬೆಗೆ ಸರೀಗೆ ಕಾಣುತ್ತಿಲ್ಲ" ಎಂದು ಹೇಳಿ, ಬಟ್ಟೆ ಹಾಕಿಕೊಳ್ಳಲು ಹೇಳಿ ಒಳಗಿನ ಕೋಣೆಗೇ ಸಗಾಕಿದಳು.
ಒಳಗಿನ ಕೋಣೆಯ ನಿಲುವು ಕನ್ನಡಿ ಮುಂದೆ ನಿಂತ ಮಗ ಮೋಸ ಹೋದ ದ್ವನಿಯಲ್ಲಿ ಕೂಗಿದ "ಏನಮ್ಮ ನೀನು ಸುಳ್ಳು ಹೇಳ್ತಿಯಾ..... ನಾನು ಬೆಳ್ಳಗೆ ಆಗಿಲ್ಲ... ನನ್ನ ಸಾಮಾನು ನೋಡು ಕಪ್ಪಗೆ ಇದೇ!!!"
ಮತ್ತೊಂದು ಸವಾಲು!!!
ಅಮ್ಮಂದಿರ ದಿನದ ಶುಭಾಶಯಗಳು!!!
Sunday, April 3, 2011
ಸಮಾಧಾನ
ಸಮಾಧಾನ
ಹುಡುಗಿ, ಕತ್ತಲ್ಲಲ್ಲಿ ಕೂತು ಬಿಕ್ಕಿ
ವರ್ಥಗೋಳಿಸ ಬೇಡ ಕಣ್ಣಿರ ಹನಿ
ನಿನ್ನಲ್ಲಿ ಮೊಳೆಯಲಿ ಸಣ್ಣ ಆಶಾ ಗರಿಕೆ
ತಟ್ಟನೆ ಹಾರಿ ಹೋದ ಹಾಡಿನ ಹಕ್ಕಿ
ಉಳಿಸಿ ಹೋಗಿಹಿದು ಹಾಡಿನ ಗುಂಗು
ಸಿಕ್ಕಿರಬಹುದು ಅದೆಕ್ಕೆಲ್ಲೋ ಹೊಸ ನಂಟು
ನೀ ಹಳೆ ಹಾಡಿನ ಗುಂಗು ಮರೆತು
ಹುಡುಕಿಕೊ ಹೊಸದೊಂದು ಹಾಡು
ಅದು ಜೀವನದ ಅನಿವಾರ್ಯ ತುರ್ತು
ಹಳೆಯ ಕಹಿ ಬೇಡ ಕೊರಗ ಬೇಡ
ಅಯ್ಯೋ! ಹಾಳು ವಿಧಿಯೇ ಎಂದು ಶಪಿಸಿ
ಸ್ವ-ಕನಿಕರದಿ ಮರುಗ ಬೇಡ
ಹೋರಾಟವಿಲ್ಲ ಬದುಕು ಎಂಥಾ ಬದುಕು!?
ನಿನ್ನೆ ಅದು ಸತ್ಯ ಇಂದು ಇದು ಸತ್ಯ
ಮಾಗಿದವಗೆ ಪ್ರತಿನಿತ್ಯ ಹೊಸ ಸತ್ಯ
ಏಳೇಳು... ಎದ್ದೇಳು.... ಹುಡುಗಿ
ಹೊಸ ಬದುಕಿಗೆ ಸಿದ್ಧಳಾಗು
ಹೊಸ ನೀರು ಹರಿದಿಹುದು ಗಂಗೆಯಲ್ಲಿ
Monday, February 21, 2011
ಸರ್ವಶಕ್ತ ತಂದೆ!!!

Sunday, February 20, 2011
ರೈಲು ಬರಲೇ ಬಾರದಿತ್ತು!

- ವಿದ್ಯಾಶಂಕರ್ ಹರಪನಹಳ್ಳಿ, ಟುಲೂಸ್, ಫ್ರಾನ್ಸ್
-೧-
ಹಾಳದ ಸೂರ್ಯ ಹುಟ್ಟುವಾಗಲೇ ಒದ್ದೆಮುದ್ದೆ
ಅಗಾಧ ಬಯಲು ನನ್ನ ಮುಂದೆ
ಅನವರತ ಕಾಯಬೇಕು ಎಂದೋ ಬರುವ ರೈಲಿಗೆ
ಸುಡುಗಾಡು ಸ್ಟೇಷನ್ ಮಾಸ್ಟರ್
ಕೊಡುವುದಿಲ್ಲ ಯಾವ ಗ್ಯಾರೆಂಟಿ
ಎಂದು ಬರುವುದೋ ಆ ರೈಲು?
ಮರೆಯಬೇಕು ಬದುಕಿನ ಬಗ್ಗಡಗಳ
ಮೀರಬೇಕು ಅನುಮಾನ ಅವಮಾನಗಳ
ಕಣ್ಣ ಮುಂದೆ ಮಿಂಚುವ ರೈಲಹಳಿ
(ಇರಬಹುದು ಇದು ನನ್ನ ಸ್ವರ್ಗಕ್ಕೆ ದಾರಿ)
ಜೊತೆಗೆ ಜೊತೆಗೆ ಕೊರೆಯುವ ಚಳಿ
ಈ ಹಾದಿಯಲಿ ಸೋಲಬಾರದು ನನ್ನ ಕಾಲು
ಇನ್ನೇನು ಬರಬಹುದು ನನ್ನ ರೈಲು
ಕೇಳುತಿಹುದು ದೂರದಲ್ಲೆಲ್ಲೋ
ರೈಲಿನ ಮೋಹನ ಮುರಳಿ
ಕಾಯುತಿರುವ ಮಂಪರಿನಲ್ಲಿ
ಅನೇಕ ಭ್ರಮೆಗಳ ದಾಳಿ
ಕಾಯಬೇಕು ಕನಸುಗಳ, ತಾಕದಂತೆ ನಿರಾಸೆಯ ಕೊಳ್ಳೀ
ಬರುತಿರಬಹುದು ಇನ್ನೇನು ನನ್ನ ರೈಲು
-೨-
ಬಂದುಬಿಟ್ಟಿದೆ ಹಾಳು ರೈಲು
ಅಂದುಕೊಂಡದ್ದಕ್ಕಿಂತ ಬಲು ಚಿಕ್ಕದು
ಜೊತೆಗೆ ಸಹಪಯಣಿಕರ ನೂಕುನುಗ್ಗಳು
ಮೊದಲೇ ಬಹು ಚೆನ್ನಿತ್ತು!
ನನ್ನ ಮುಂದೆ ಅಗಾಧ ಬಯಲು
ಕಾಯುವುದಕ್ಕೆ ಒಂದು ರೈಲು!
Monday, November 1, 2010
ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು!
Saturday, October 2, 2010
ಅಪ್ಪ ಬಂದ್ರು!

- ವಿದ್ಯಾಶಂಕರ ಹರಪನಹಳ್ಳಿ,
ಬೆಂಗಳೂರು
೦೨/೧೦/೨೦೧೦
-೧-
ಬಹುದಿನದ ನಂತರ ಊರಿಂದ ಮರಳಿದಾಗ ಮಗನ ಉದ್ಗಾರ
"ಅಪ್ಪ ಬಂದ್ರು!"
ಅದನ್ನು ಸ್ನೇಹಿತರಿಗೆ ಹೇಳುವ ಸಂಭ್ರಮ
"ನಮ್ಮ ಅಪ್ಪ ಬಂದ್ರು!"
ಹುಚ್ಚುಕೋಡಿ! ಎಷ್ಟು ಅಭದ್ರತೆ ಅನುಭವಿಸುತಿತ್ತೊ...!
ಇನ್ನು ವರುಷ ಐದು...
ಹುಡುಕುತ್ತಿತ್ತಂತೆ ಅಪ್ಪನ್ನ ದಿನವೂ ಬೆಳಗ್ಗೆ ಎದ್ದು...
ಊಹ್ಂ ಬಿಟ್ಟು ಬಿಡಬೇಕು ಈ ಕೆಲಸ ಎನ್ನುವೆ ಮನನೊಂದು...
ಸಾಧ್ಯವಿಲ್ಲ ಎನ್ನುವುದು ನನಗೂ ಗೊತ್ತು ನಿಮಗೂ ಗೊತ್ತು
-೨-
ಪ್ರತಿನಿತ್ಯ ರಾತ್ರಿ ಮನೆಗೆ ಬಂದಾಗ
ಸ್ವಾಗತಿಸುವವು ಚದುರಿದ ಆಟದ ಬೊಂಬೆಗಳು
ಮಲಗಿದ ಮಗು...
ಆಕಾಶದಲ್ಲಿ ಕರುಣಾಮುಖಿ ಚಂದ್ರ...
ಹೊಳೆವ ಕಣ್ಣಿರ ಹನಿ ನಕ್ಷತ್ರ?!
ತಲೆಯಲ್ಲಿ ಅರಬೆಂದ ಅಫೀಸ್ ಕೆಲಸಗಳು...
ಮನಸ್ಪೂರ್ತಿಯಾಗಿ ನಗಲು ಬಿಡುವುದಿಲ್ಲ... ಅಳಲು ಬಿಡುವುದಿಲ್ಲ...
ಊಹ್ಂ ಬಿಟ್ಟು ಬಿಡಬೇಕು ಈ ಕೆಲಸ ಎನ್ನುವೆ ಮನನೊಂದು...
ಸಾದ್ಯವಿಲ್ಲ ಎನ್ನುವುದು ನನಗೂ ಗೊತ್ತು ನಿಮಗೂ ಗೊತ್ತು
-೩-
ತಪ್ಪಿತಸ್ಥನೆಂಬ ಭಾವ ಅವರಿಸಿದಾಗ...
ಪರಿಹಾರವೆಂಬಂತೆ ನಿಮ್ಮಂತೆ ನಾನು ಕೊಳ್ಳುವೆ ಆಟದ ಬೊಂಬೆ ಇನ್ನೆರಡು
ಯಾವ ಬೊಂಬೆಯು ತರಿಸುವುದಿಲ್ಲ ಉದ್ಗಾರ... "ಅಪ್ಪ ಬಂದ್ರು!"
Sunday, July 11, 2010
ಸಂತೃಪ್ತಿ (ಕತೆ)
- ವಿದ್ಯಾಶಂಕರ ಹರಪನಹಳ್ಳಿ
ಒಂದು ಉರಿನಲ್ಲಿ ಒಬ್ಬ ಯುವಕನಿದ್ದ ಅವನಿಗೆ ಅಗಾಧವಾದ ಹಸಿವಿನ ರೋಗವಿತ್ತು. ಎಷ್ಟು ತಿಂದರೂ ತೃಪ್ತಿ ಇಲ್ಲ, ತಳವಿಲ್ಲದ ಬಾವಿಯಂತಹ ಹೊಟ್ಟೆ, ಎಷ್ಟು ತಿಂದರೂ ಇಂಗದ ಹಸಿವು! ಮನೆ ಮದ್ದಾಯಿತು, ಅಲೋಪತಿ, ಹೋಮಿಯೋಪತಿ, ನಾಟಿ ಔಷಧಿ ಎಲ್ಲಾ ಪ್ರಯತ್ನಿಸಿದರು, ಹಲವು ದೇವರಿಗೆ ಹರಕೆ ಹೊತ್ತರು. ಯಾವುದೂ ಫಲ ನೀಡಲಿಲ್ಲ. ಅವನಿಗೆ ಆಹಾರ ಹೊಂದಿಸಿವುದೇ ಒಂದು ಸಮಸ್ಯೆಯಾಯಿತು. ಕೊನೆಗೆ ಅವನ ತಂದೆ ತಾಯಿ, ಅವನ ಬಂಧು-ಬಳಗ ಎಲ್ಲಾ ಕೈ ಚೆಲ್ಲಿದರು!
ಈಗಿನ ಕಾಲದವರಂತಲ್ಲ, ಆಗಿನ ಕಾಲದ ಜನ. ಅವನ ಊರಿನವರು ಯುವಕನ ಕುಟುಂಬಕ್ಕೆ ತುಂಬಾ ಸಹಾಯ ಮಾಡಿದರು. ಕೊನೆಕೊನೆಗೆ ಇದು ಊರಿನವರ ಸಮಸ್ಯೆಯಾಯಿತು. ಇಡಿ ಊರಿನಲ್ಲಿ ಆಹಾರದ ಕೊರತೆ ಕಂಡುಬಂತು. ಊರವರು ಅಸಮಧಾನ ಸೂಚಿಸುವ ಮೊದಲೇ ಅವನ ತಂದೆತಾಯಿ ಅವನನ್ನು ಊರಿಂದ ಹೊರಕಳಿಸುವ ವಿಚಾರ ಮಾಡಿದರು. ಎಲ್ಲೋ ದೂರದ ಆಶಾಭಾವನೆ ಮತ್ತು ಕರುಳಿನ ಸಂಕಟ ಇಷ್ಟು ದಿನ ಅವರನ್ನು ತಡೆಯುತಿತ್ತು. ಆದರೆ ಆಹಾರದ ಕೊರತೆ ಇಡೀ ಊರನ್ನೇ ವ್ಯಾಪಿಸಿದಾಗ ಅವರು ಗಟ್ಟಿ ನಿರ್ಧಾರ ತೆಗೆದುಕೊಳ್ಳಲೇ ಬೇಕಾಯಿತು.
ದೇವರ ದಯೆಯೋ ಅವರ ಪೂರ್ವ ಜನ್ಮದ ಪುಣ್ಯವೋ, ಸಮಯಕ್ಕೆ ಸರಿಯಾಗಿ ಆ ಊರಿಗೆ ಒಬ್ಬ ಸನ್ಯಾಸಿಯ ಅಗಮನವಾಯಿತು. ಅವರ ಸಾಧನೆ ಸಾರ್ಮಥ್ಯದ ಬಗ್ಗೆ, ಅವರಿಗಿರುವ ವಿಶೇಷ ಶಕ್ತಿ ಬಗ್ಗೆ ಅನೇಕ ದಂತಕತೆಗಳಿದ್ದವು. ಕೊನೆ ಪ್ರಯತ್ನವೆಂಬಂತೆ ಯುವಕನ ತಂದೆತಾಯಿ ಸನ್ಯಾಸಿಯ ಹತ್ತಿರ ಯುವಕನ ಸಮಸ್ಯೆಯನ್ನು ನಿವೇದಿಸಿದರು.
ಸಮಸ್ಯೆಯನ್ನು ಆಲಿಸಿದ ಸನ್ಯಾಸಿ ಸಾವಧಾನದಿಂದ ಹೀಗೆಂದರು: "ಚಿಂತಿಸಬೇಡಿ, ಪರಿಹಾರವಿದೆ! ಈ ಯುವಕ ಇನ್ನು ಜೀವನ ಪೂರ್ತಿ ಒಬ್ಬನೆ ಕುಳಿತು ತಿನ್ನುವ ಹಾಗಿಲ್ಲ. ಪ್ರತಿಸಾರಿ ಊಟಕ್ಕೆ ಕುಳಿತಾಗ ನಾಲ್ಕು ಜನರೊಂದಿಗೆ ಹಂಚಿ ತಿನ್ನಬೇಕು. ಈ ನಿಯಮ ತಪ್ಪಿಸಿದರೆ ಮತ್ತೆ ಅಗಾಧವಾದ ಹಸಿವಿನ ರೋಗಕ್ಕೆ ಬಲಿಯಾಗುವ ಸಾಧ್ಯತೆಯಿದೆ."
ಸನ್ಯಾಸಿ ತೋರಿದ ಪರಿಹಾರದ ಬಗ್ಗೆ ಅನುಮಾನವಿದ್ದರೂ, ವಿಚಿತ್ರವೆನಿಸಿದರೂ, ಕೊನೆ ಪ್ರಯತ್ನವಾಗಿ ಅವರ ಸಲಹೆಯನ್ನು ಪಾಲಿಸಿದಾಗ ಆಶ್ಚರ್ಯವೆಂಬಂತೆ ಯುವಕನ ಅಗಾಧವಾದ ಹಸಿವಿನ ರೋಗ ಪರಿಹಾರವಾಯಿತು! ಯುವಕ ಸ್ವಲ್ಪ ತಿಂದರೂ ಸಂತೃಪ್ತಿಯನ್ನು ಅನುಭವಿಸಿದ.
ಊರಿನವರೆಲ್ಲ ಹರ್ಷದಿಂದ ಸನ್ಯಾಸಿಗೆ ಸನ್ಮಾನಿಸಿದರು. ಊರಿನವರಿಗೆಲ್ಲ ಆಶೀರ್ವಾದ ವಚನ ನೀಡುವಾಗ ಹೀಗೆ ಹೇಳಿದರು "ಅತಿ ಶ್ರೀಮಂತಿಕೆಯ ಅಥವಾ ಅತಿ ಹಣದಾಹವಿರುವವರು ಕೂಡ ಈ ಪರಿಹಾರವನ್ನು ಬಳಸಿ ಜೀವನದಲ್ಲಿ ಸಂತೃಪ್ತಿ ಹೊಂದಬಹುದು!"
ಆ ಹೊತ್ತಿಗೆ ಕಾರ್ಲ್ ಮಾಕ್ಸ್ ಇನ್ನೂ ಹುಟ್ಟಿರಲಿಲ್ಲ!!!
