ನಿನ್ನ ಒಲವ ಬೇಡುವುದು ನನ್ನ ಮನಸು
ಕೋಗಿಲೆಯು ನಲಿನಲಿದು ಉಲಿಯುವುದು ವಸಂತದಲಿ
ಎನ್ ಮನವು ನಲಿಯುವುದು ನಿನ್ನ ಸಂಗದಲಿ
ಚೈತ್ರದ ಚಿಗುರಿನಲಿ ಸಂಭ್ರಮದ ಹೊಂಗನಸು
ನಿನ್ನ ಸಂಗಕೆ ಹಾತೊರೆಯುವುದು ನನ್ನ ಮನಸು
ನಿನ್ನ ಒಲವ ಬೇಡುವುದು ನನ್ನ ಮನಸು -೧-
ಶೃಂಗಾರದೂರಿಂದ ಕನಸುಗಳ ಹೊತ್ತು ತಂದಿರುವೆ
ನೀ ದೂರ ಸರಿಯದಿರು ಓ ಚೆಲುವೆ
ಬೆಳಗಿನ ಚುರುಕಿನಲಿ, ಅಬ್ಬರದ ಮಧ್ಹ್ಯನದಲಿ
ಏನೆಲ್ಲ ಗಳಸಿದರೂ, ಜೀವನದ ಸಂಧ್ಯದಲಿ
ನಿನ್ನ ಒಲವ ಬೇಡುವುದು ನನ್ನ ಮನಸು -೨-