ನಾನು software ಇಂಜಿನಿಯರ್ ಜೋಕೆ!
ನಾನು software ಇಂಜಿನಿಯರ್ ಜೋಕೆ !
ಕಲಿತಿರುವೇ Java, C, C++, dotnet ಭಾಷೆ
ನನಗೆ ಬೀಳುವುದೆಲ್ಲ ಡಾಲರ್ ಕನಸೆ!
ತಲೆ ನಿಲ್ಲಲ್ಲ ಭುಜದ ಮೇಲೆ... ಅದ್ರು ನಾನು ಓಕೆ!! ೧
ಎಲ್ಲ ಮಾತಲ್ಲೂ ಹಾಕುವೆ ಲಾಜಿಕ್-ನ ಕೊಕ್ಕೆ
ವಿನಯದಿ ಹೇಳುವೆ ನನಗೆ ಸ್ವಲ್ಪ ಜಾಸ್ತಿ ಸೊಕ್ಕೆ!
ಬರೆದ ಪ್ರತಿ program-ನಲ್ಲಿ ಸಿಗುವುದು bug-ಗಳ ಬೊಕ್ಕೆ
ಅದ್ರು ಆಗಿಲ್ಲ ನನ್ನ ಅತ್ಮವಿಶ್ವಾಸಕೆ ಧಕ್ಕೆ!! ೨
Down-turn ಆದ್ರೆ ನಾನು Manager-ನ ಮುದ್ದಿನ ಬೆಕ್ಕೇ
Manager ಹೇಳಿದಕ್ಕೆಲ್ಲ ನಾನ್ ಅನ್ನುವೆ OK! OK!!
ಅಮೇರಿಕಾ ಹಾರಲು ಸಾಕು virtual ರೆಕ್ಕೆ
ಅಲ್ಲಿಗೆ ಹೋದಮೇಲೆ ಗೊತ್ತು ನಂಗೆ resignation ಬಿಸಾಕೊಕ್ಕೆ ೩
ಹಿಂಗಲ್ಲ ಅಡಿ ಅಡಿ ಜೀವನವಾಯಿತು ಸಿಕ್ಕು ಸಿಕ್ಕೇ
ಹೀಗೇಕೆ ಎಂದು ಕೇಳದಿರಿ ನಿಮಗಿಲ್ಲ ಆ ಹಕ್ಕೆ!?
ನಾನು software ಇಂಜಿನಿಯರ್ ಜೋಕೆ !
ತಲೆ ನಿಲ್ಲಲ್ಲ ಭುಜದ ಮೇಲೆ... ಅದ್ರು ನಾನು ಓಕೆ!! ೪
ತಲೆ ನಿಲ್ಲಲ್ಲ ಭುಜದ ಮೇಲೆ... ಅದ್ರು ನಾನು ಓಕೆ!! ೪
- ವಿದ್ಯಾಶಂಕರ್ ಹರಪನಹಳ್ಳಿ