Showing posts with label ಕಟ್ಟೆ ಹುಡುಗರು ಸ್ವಾಮಿ... ಕನ್ನಡ ಕವನ ವಿದ್ಯಾಶಂಕರ ಹರಪನಹಳ್ಳಿ. Show all posts
Showing posts with label ಕಟ್ಟೆ ಹುಡುಗರು ಸ್ವಾಮಿ... ಕನ್ನಡ ಕವನ ವಿದ್ಯಾಶಂಕರ ಹರಪನಹಳ್ಳಿ. Show all posts

Sunday, November 2, 2008

ಕಟ್ಟೆ ಹುಡುಗರು ಸ್ವಾಮಿ...

ಕಟ್ಟೆ ಹುಡುಗರು ಸ್ವಾಮಿ

ಕಟ್ಟೆ ಹುಡುಗರು ಸ್ವಾಮಿ
ಕೆಟ್ಟ ಹುಡುಗರು ಅಲ್ವೇ ಅಲ್ಲ...

ಮಿಡ್ಲಿಸ್ ಸ್ಕೂಲಲ್ಲಿ ಗಲಾಟೆ ಮಾಡಿ
ಟೀಚರ್ ಹೊರಗ್ ಹಾಕಿದಾಗ
ರಾಜನ್ ತರ ಹೊರಗ್ ಹೋಗಿ,
ಬಾಲ್ಯದಲ್ಲೇ ಪ್ರತಿಭೆ ಮೆರೆದವ್ರು
ಟೀಚರ್ಗೆ ಕನ್ಫೂಸ್ ಮಾಡಿ ಸ್ಕೋಪ್ ತೊಗೊಂಡೋರು...

ಕಟ್ಟೆ ಹುಡುಗರು ಸ್ವಾಮಿ
ಕೆಟ್ಟ ಹುಡುಗರು ಅಲ್ವೇ ಅಲ್ಲ...

ಕಾಲೇಜಲ್ಲಿ ಹುಡ್ಗಿ ಹಿಂದೆ ಹೋಗಿ
ನುಲಿನುಲಿದು ರೋಜ್ ಕೊಟ್ಟು
ಹುಡುಗಿ ಅಚಾನಕ್ಕಾಗಿ ಇಸ್ಕೊಂಡಾಗ
ಕನ್ಫುಸಾಗಿ, ಭಯಂಕರ ಗಾಬರಿಯಾಗಿ
"Thank you Sister" ಅಂದವರು...

ಕಟ್ಟೆ ಹುಡುಗರು ಸ್ವಾಮಿ
ಕೆಟ್ಟ ಹುಡುಗರು ಅಲ್ವೇ ಅಲ್ಲ...

ಡಿಗ್ರಿ ಕ್ಲಾಸ್ ಬಂಕ್ ಮಾಡಿ,
ಮಾರ್ನಿಂಗ್ ಶೊ ಮಲಯಾಳಿ ಸಿನಿಮಾ ನೋಡಿ
ಸಂಜೆ ಹೊತ್ತಿಗೆ ಕಸಿವಿಸಿಯಾಗಿ
ಸಾಯಂಕಾಲ ರಾಯರ ಮಠಕ್ಕೋಗಿ
ಪ್ರಾಯಶ್ಚಿತ ಮಾಡಿಕೊಂಡವ್ರು...

ಕಟ್ಟೆ ಹುಡುಗರು ಸ್ವಾಮಿ
ಕೆಟ್ಟ ಹುಡುಗರು ಅಲ್ವೇ ಅಲ್ಲ...

ಕೆಲಸಕ್ಕೆ ಸೇರೋದಕ್ಕೆ ಒಂದೇ ಕಾರಣ
ತಿಂಗಳಾ ತಿಂಗಳಾ ಸಂಬಳ ಬಂದ್ರೆ
ಯಥೇಚ್ಛವಾಗಿ ಧಮ್-ಗೆ ಮತ್ತು ಎಣ್ಣೆಗೆ ಕಾಂಚಣ...
ಎಂಥ ಉದಾತ್ತ ಉದ್ದೇಶ ನಮ್ಮದು
ಅಪ್ಪ ಅಮ್ಮಗೆ ಗೊತ್ತಾಗಿದ್ರೆ ಬಾಯಿ ಬಡುಕೊಳ್ತಾಯಿದ್ರು...

ಆದ್ರೂನೂ, ಕಟ್ಟೆ ಹುಡುಗರು ಸ್ವಾಮಿ
ಕೆಟ್ಟ ಹುಡುಗರು ಅಲ್ವೇ ಅಲ್ಲ...

ಈಗ ಎಲ್ಲಾ ಒಂದೊಂದು ದೇಶ ಒಂದೊಂದು ದಿಕ್ಕು
ಎಲ್ಲೇ ಇದ್ರೂ, ಸಿಕ್ಕಾಗ ದೊಡ್ಡದಾಗಿ ನಕ್ಕು, ನಲಿಸಿ
ಮರೆಯಲೆಲ್ಲೋ ಕಣ್ಣೀರು ವರಸಿಕೊಂಡು...
ಮತ್ತೆ ಕಟ್ಟೆಯ ಸುಖವ,ಸಖ್ಯವ ಬಯಸುವವರು
ಮದುವೆ ಆದ್ರು ನಾನು ಹುಲಿ ಸಿಂಹ ಅಂತ ಅಬ್ಬರಿಸೋರು

ಕಟ್ಟೆ ಹುಡುಗರು ಸ್ವಾಮಿ
ನಾವು ಕೆಟ್ಟ ಹುಡುಗರು ಅಲ್ವೆ ಅಲ್ಲ...